Tuesday, 1 January 2013

ಹೊಸವರ್ಷ-ಹೊಸಹರ್ಷ


ಸವಿನೆನಪ ಹೊತ್ತ ಹೊತ್ತಿಗೆಯ ನೀ ತಾ..
ಕಣ್ಗತ್ತಲ ಬದುಕಿಗೆ ಹೊ೦ಬೆಳಕ ನೀ ತಾ..

ದು೦ಬಿಯಾಗಿ ಮೈಸೋತು ಸುಮಕೆ
ಮಕರ೦ದದ ಸವಿಯ ಮನಕೆ ನೀ ತಾ..
ಬಾಗಿಸಿ ಆಗಸವ, ಬಳಿದು ಬಣ್ಣವ
ಅ೦ದದ ಕಾಮನಬಿಲ್ಲ ಜಗಕೆ ನೀ ತಾ..

ಕಡೆದು ಹೃದಯವ, ಬೆರೆಸಿ ಬಾವನೆಯ
ಕವಿಹೃದಯಕೆ ಸವಿಕಾವ್ಯವ ನೀ ತಾ..
ಮರೆತು ವೈರವ, ಕಲೆತು ಮನವ
ನಿಟ್ಟುಸಿರನುಸಿರುವ ನೆಮ್ಮದಿಯ ನೀ ತಾ..

ಅಳಿಸಿ ಕಷ್ಟವ, ಸುಖವ ತರುವ
ಹೊಸ ಯೋಜನೆಯ ಕನಸ ನೀ ತಾ..
ಹಳೆ ವರ್ಷದ ಕಹಿಯ ಮರೆಸಿ
ಹೊಸಹರುಷವ ನಮೆಗೆಲ್ಲ ನೀ ತಾ..