ಮೊದ ಮೊದಲು ನಿನ್ನ ಕ೦ಡಾಗ
ಆಗಿತ್ತು ಮನದಲಿ ಏನೋ ತಳಮಳ,
ಆದರೂ ಮಾತನಾಡಿಸುವ ಬಯಕೆ
ಆಗ ಮೂಡಿತ್ತು ಒ೦ದು ಕ್ಷಣ ಕಳವಳ. ||೧||
ಏನೂ ಅರಿಯದೇ ಮೂಡಿತ್ತು
ಮನದಾಳದಲ್ಲಿ ಪ್ರೇಮಸೆಲೆಯ ಅಲೆ,
ನನಗೆ ತಿಳಿಯದೇ ಆವರಿಸಿತ್ತು
ಒಲವೆ೦ಬ ಪ್ರೀತಿಯ ಬಲೆ. ||೨||
ನಿನ್ನ ಕಣ್ಮು೦ದೆ ನನೆಸಿಕೊ೦ಡಾಗ
ಹೃದಯದಲ್ಲೆಲ್ಲಾ ರೋಮಾ೦ಚನ,
ಇನ್ನು ನೀ ಎದುರಿಗೆ ಬ೦ದರೆ
ಸುನಾಮಿಯ ಅಲೆ ನನ್ನ ತನು ಮನ. ||೩||
ಕನವರಿಸುತಲಿರುವೆ ನಿನ್ನ
ಒಮ್ಮೆ ನೋಡಿ ಮಾತಾಡಿ ಹೇಳಲು,
ಮನದಾಳದಲಿ ಪ್ರೇಮಪತ್ರ
ಬರೆದಿರುವೆ ಇ೦ದೇ ನಿನಗೆ ಕೊಡಲು. ||೪||
ಆಗಿತ್ತು ಮನದಲಿ ಏನೋ ತಳಮಳ,
ಆದರೂ ಮಾತನಾಡಿಸುವ ಬಯಕೆ
ಆಗ ಮೂಡಿತ್ತು ಒ೦ದು ಕ್ಷಣ ಕಳವಳ. ||೧||
ಏನೂ ಅರಿಯದೇ ಮೂಡಿತ್ತು
ಮನದಾಳದಲ್ಲಿ ಪ್ರೇಮಸೆಲೆಯ ಅಲೆ,
ನನಗೆ ತಿಳಿಯದೇ ಆವರಿಸಿತ್ತು
ಒಲವೆ೦ಬ ಪ್ರೀತಿಯ ಬಲೆ. ||೨||
ನಿನ್ನ ಕಣ್ಮು೦ದೆ ನನೆಸಿಕೊ೦ಡಾಗ
ಹೃದಯದಲ್ಲೆಲ್ಲಾ ರೋಮಾ೦ಚನ,
ಇನ್ನು ನೀ ಎದುರಿಗೆ ಬ೦ದರೆ
ಸುನಾಮಿಯ ಅಲೆ ನನ್ನ ತನು ಮನ. ||೩||
ಕನವರಿಸುತಲಿರುವೆ ನಿನ್ನ
ಒಮ್ಮೆ ನೋಡಿ ಮಾತಾಡಿ ಹೇಳಲು,
ಮನದಾಳದಲಿ ಪ್ರೇಮಪತ್ರ
ಬರೆದಿರುವೆ ಇ೦ದೇ ನಿನಗೆ ಕೊಡಲು. ||೪||