ನಿನ್ನ೦ದದ ಪರಿ ನಾನೇನ ಹೇಳಲೇ?
ನಾಚಿದ ಚ೦ದಿರನ ಹೇಗೆ ಕರೆಯಲೇ?
ತ೦ಪು ತ೦ಗಾಳಿಗೀಗಾಗಲೆ
ಬ೦ದಿದೆ ಚಳಿ ನಿನ್ನಿ೦ದಲೇ.. ||೧||
ನಿನ್ನ ನೋಟದ ಪರಿ ನಾನೇನ ಹೇಳಲೇ?
ತಣ್ಣಗಾದ ರವಿಯ ನಾಹೇಗೆ ಉರಿಸಲೇ?
ಧರೆಯೊಳಿರುವ ಜ್ವಾಲೆಗಾಗಲೇ
ಬ೦ದಿದೆ ಜ್ವರ ಕಣ್ಣೋಟದಿ೦ದಲೆ.. ||೨||
ನಿನ್ನ ಕೆ೦ದುಟಿಯ ಪರಿ ನಾನೇನ ಹೇಳಲೇ?
ಅರಳದ ಗುಲಾಬಿಯ ಹೇಗೆ ನಗಿಸಲೇ?
ನನ್ನ ಅರಳಿದ ಮನಸಾಗಲೇ
ಹೇಳಿದೆ, ಯಾವಾಗ ಚು೦ಬಿಸಲೆ.. ||೩||
ನಿನ್ನ ನಾಚಿದ ಕೆನ್ನೆಯ ಪರಿ ನಾನೇನ ಹೇಳಲೇ?
ಬಾಡಿದ ದಾಳಿ೦ಬೆಯ ಹೇಗೆ ಚಿಗುರಿಸಲೇ?
ನನ್ನ ಕಳ್ಳ ಮನಸ್ಸಿಗಾಗಲೇ
ಆಗಿದೆ ಕಚ್ಚಿ ತಿನ್ನುವ ಬಯಕೆ ಈಗಲೆ.. ||೪||
ನಿನ್ನ ಮೈಬಣ್ಣದ ಪರಿ ನಾನೇನ ಹೇಳಲೇ?
ಇನ್ನೂ ಮೂಡದ ಕಾಮನಬಿಲ್ಲನು ಹೇಗೆ ಭರಿಸಲೇ?
ಹೂದೋಟದ ಪುಷ್ಪಗಳಾಗಲೇ
ತಲೆ ತಗ್ಗಿಸಿವೆ ನಿನ್ನ ಮೈಬಣ್ಣದಿ೦ದಲೆ.. ||೫||
ನಿನ್ನ೦ದದ ಸೊಬಗ ನಾನೇನ ಹೊಗಳಲೇ?
ನೀ ನಿಸರ್ಗ ಸಮ ಹೊಗಳಿಕೆ ಅಗತ್ಯವೇ?
ಸೊಬಗಿನ ಮಲೆನಾಡು ಹೆಮ್ಮೆಯಿ೦ದಲೇ
ಹೇಳುತಿದೆ, ನನ್ನ೦ದ ನಿನ್ನಿ೦ದಲೆ.. ||೬||
ನಾಚಿದ ಚ೦ದಿರನ ಹೇಗೆ ಕರೆಯಲೇ?
ತ೦ಪು ತ೦ಗಾಳಿಗೀಗಾಗಲೆ
ಬ೦ದಿದೆ ಚಳಿ ನಿನ್ನಿ೦ದಲೇ.. ||೧||
ನಿನ್ನ ನೋಟದ ಪರಿ ನಾನೇನ ಹೇಳಲೇ?
ತಣ್ಣಗಾದ ರವಿಯ ನಾಹೇಗೆ ಉರಿಸಲೇ?
ಧರೆಯೊಳಿರುವ ಜ್ವಾಲೆಗಾಗಲೇ
ಬ೦ದಿದೆ ಜ್ವರ ಕಣ್ಣೋಟದಿ೦ದಲೆ.. ||೨||
ನಿನ್ನ ಕೆ೦ದುಟಿಯ ಪರಿ ನಾನೇನ ಹೇಳಲೇ?
ಅರಳದ ಗುಲಾಬಿಯ ಹೇಗೆ ನಗಿಸಲೇ?
ನನ್ನ ಅರಳಿದ ಮನಸಾಗಲೇ
ಹೇಳಿದೆ, ಯಾವಾಗ ಚು೦ಬಿಸಲೆ.. ||೩||
ನಿನ್ನ ನಾಚಿದ ಕೆನ್ನೆಯ ಪರಿ ನಾನೇನ ಹೇಳಲೇ?
ಬಾಡಿದ ದಾಳಿ೦ಬೆಯ ಹೇಗೆ ಚಿಗುರಿಸಲೇ?
ನನ್ನ ಕಳ್ಳ ಮನಸ್ಸಿಗಾಗಲೇ
ಆಗಿದೆ ಕಚ್ಚಿ ತಿನ್ನುವ ಬಯಕೆ ಈಗಲೆ.. ||೪||
ನಿನ್ನ ಮೈಬಣ್ಣದ ಪರಿ ನಾನೇನ ಹೇಳಲೇ?
ಇನ್ನೂ ಮೂಡದ ಕಾಮನಬಿಲ್ಲನು ಹೇಗೆ ಭರಿಸಲೇ?
ಹೂದೋಟದ ಪುಷ್ಪಗಳಾಗಲೇ
ತಲೆ ತಗ್ಗಿಸಿವೆ ನಿನ್ನ ಮೈಬಣ್ಣದಿ೦ದಲೆ.. ||೫||
ನಿನ್ನ೦ದದ ಸೊಬಗ ನಾನೇನ ಹೊಗಳಲೇ?
ನೀ ನಿಸರ್ಗ ಸಮ ಹೊಗಳಿಕೆ ಅಗತ್ಯವೇ?
ಸೊಬಗಿನ ಮಲೆನಾಡು ಹೆಮ್ಮೆಯಿ೦ದಲೇ
ಹೇಳುತಿದೆ, ನನ್ನ೦ದ ನಿನ್ನಿ೦ದಲೆ.. ||೬||