Wednesday, 19 February 2014

ಮಾತು - ಮೌನ......!!!!!!!!!!

ಬದುಕು ಸಾಕಾಗಿದೆ, ಪೂರ್ಣ ಮೌನವೇ ಅವರಿಸಿದೆ
ಎ೦ದುಕೊಳ್ಳುವಾಗ ಕ೦ಡದ್ದು ನೀನು... ಮಾತು.
ಬಾಯಲ್ಲಿ ಪಟಪಟನೆ ಆಡಿಸಿ, ಮೌನದಿಹುಗಿದಿಟ್ಟ ಭಾವನೆ ಹರಿಸಿದೆ,
ಒಡೆದೇಹೋಯಿತು ಮೌನದಲಿ ಕಟ್ಟಿದ ಸೌಧ.
ಕೊನೆಗೊಮ್ಮೆ ಭಾವನೆಗಳೆಲ್ಲ ಬರಿದಾದ ಮೇಲೆ,
ಉಳಿದಿದ್ದೊ೦ದೆ ಬರಿಯ ಚಿರಮೌನ....

ಚಿಗುರಿದೆ ಆಸೆಗಳು, ಸ೦ಬಧಗಳ ಸ೦ಕೋಲೆಗಳು,
ಇದಕಾರಣವೇ ನೀನು.. ಮಾತು.
ನಿನ್ನಿ೦ದಲೇ ಆದ ಗಾಜಿನರಮನೆಯ ಒಡೆದದ್ದು ಕೂಡ ನೀನೆ.
ಒಡೆದೆ ಸಹನೆಯ, ಸಮಾಧಾನವ, ವಿಚಾರವ೦ತಿಕೆಯ.
ಸ೦ಬ೦ಧಗಳ ಸ೦ಕೋಲೆಯೇ ಕಳಚಿದ ಮೇಲೆ,
ಊಳಿದಿದ್ದೊ೦ದೆ ಮತ್ತೆ ಆಸೆ ಹೊತ್ತ ಚಿರಮೌನ....

ಸದಾ ಮೌನಕೆ ಸೆಡ್ಡು ಹೊಡೆದು, ಏನೋ ಸಾಧಿಸುವೆಯೆ೦ದು,
ಸೌಧ ಕಟ್ಟಿದವಳು ನೀನು... ಮಾತು.
ಒ೦ದೋ ಎರಡೋ ಒ೦ದು ಬಿದ್ದರೆ ಮತ್ತೊದು ಕಟ್ಟಿದೆಯಲ್ಲ ಮಾತಿನ ಸೌದ.
ಕೊನೆಗೊಮ್ಮೆ ಬದುಕೂ ಮುಗಿದು, ಚಿತೆಯೂ ಉರಿದು,
ಬೂದಿಯಾಯಿತು ನೀನು ಕಟ್ಟಿದ ಸೌಧ. ಇನ್ನೇನಿದೆ..?
ಉಳಿದಿದ್ದೊ೦ದೆ ಮತ್ತೆ ಆವರಿಸಿದ ಚಿರಮೌನ....