ಮನದಲಿ ಏನೋ ಉಲ್ಲಾಸ ಕಾಣುತಿದೆ
ನೀ ಬರುವೆಯೆ೦ದು ಕೇಳಿ
ತನು ಮನವು ಕಳವಳಗೊಳ್ಳುತಿದೆ
ಮತ್ತೆ ನೀ ಹೊರಡುವೆಯೆ೦ದು ಹೇಳಿ ||೧||
ಹೃದಯವು ಕುಣಿದು ಕುಪ್ಪಳಿಸುತಿದೆ
ಮನದಲಿ ಮಧುರಭಾವ ಮೂಡಿ
ಆದರೂ ಒ೦ದೆಡೆ ಬೇಸರವಾಗುತಿದೆ
ಹಳೆಯ ನನಪುಗಳು ಮತ್ತೆ ಕಾಡಿ ||೨||
ಮನಸ್ಸು ಬಹಳಸಾರಿ ಹೇಳುತಿದೆ
ಸಮಯ ವ್ಯರ್ಥ ಮಾಡಬೇಡಿ
ಆದರೂ ಹೃದಯ ತಡೆಯದೇ
ಹೇಳುತಿದೆ ಹಾಡು ಹಾಡಿ ||೩||
ವೇಗದಿ ಬಡಿತ ಹೆಚ್ಚುತಿದೆ
ಕ್ಷಣವೂ ಮಿಡಿವ ನಾಡಿ
ನಿನ್ನ ಹೊಗಳಿ ಅಟ್ಟಕ್ಕೇರಿಸುತಿದೆ
ತನು ಮನ ಹೃದಯ ಕೂಡಿ ||೪||
ನೀ ಬರುವೆಯೆ೦ದು ಕೇಳಿ
ತನು ಮನವು ಕಳವಳಗೊಳ್ಳುತಿದೆ
ಮತ್ತೆ ನೀ ಹೊರಡುವೆಯೆ೦ದು ಹೇಳಿ ||೧||
ಹೃದಯವು ಕುಣಿದು ಕುಪ್ಪಳಿಸುತಿದೆ
ಮನದಲಿ ಮಧುರಭಾವ ಮೂಡಿ
ಆದರೂ ಒ೦ದೆಡೆ ಬೇಸರವಾಗುತಿದೆ
ಹಳೆಯ ನನಪುಗಳು ಮತ್ತೆ ಕಾಡಿ ||೨||
ಮನಸ್ಸು ಬಹಳಸಾರಿ ಹೇಳುತಿದೆ
ಸಮಯ ವ್ಯರ್ಥ ಮಾಡಬೇಡಿ
ಆದರೂ ಹೃದಯ ತಡೆಯದೇ
ಹೇಳುತಿದೆ ಹಾಡು ಹಾಡಿ ||೩||
ವೇಗದಿ ಬಡಿತ ಹೆಚ್ಚುತಿದೆ
ಕ್ಷಣವೂ ಮಿಡಿವ ನಾಡಿ
ನಿನ್ನ ಹೊಗಳಿ ಅಟ್ಟಕ್ಕೇರಿಸುತಿದೆ
ತನು ಮನ ಹೃದಯ ಕೂಡಿ ||೪||
No comments:
Post a Comment