Monday, 25 March 2013

ಈ ಕವಿಹೃದಯದಲ್ಲಿ ಮೂಡಿದ ಕಾವ್ಯ ವರ್ಣನೆ....


ಕಾವ್ಯ, ಇದು ಬರಿ ಹೆಸರಲ್ಲ,
ಮನಸ್ಸಿಗೆ ಹಿತವೆನಿಸಿದ, ತ೦ಪನುಣಿಸಿವ ಮಧುರತೆಯ ಪ್ರತೀಕ.
ಇದು ಜೀವನದ ಪ್ರತಿಕ್ಷಣಗಳ ಪ್ರೀತಿಯ ಬೆಸುಗೆ.
ಸೌ೦ದರ್ಯವನ್ನು ಬರವಣಿಗೆಯಲ್ಲಿ ಸೆರೆಹಿಡಿಯುವ ಕವಿಹೃದಯ...
ಕಾವ್ಯ ಅವ್ಯಕ್ತ, ಆದರೆ ವ್ಯಕ್ತಪಡಿಸಿದ ಕವಿಹೃದಯಕದು ವ್ಯಕ್ತ.
ಓದುಗನಿಗೆ ಬರೆ ಭಾವ ವ್ಯಕ್ತ, ಅದು ಕವಿಯ ಭಾವನೆ ಎ೦ಬುದು ಓದಿದವನ ಚಿತ್ತ..
ಈ ಭಾವ ಮತ್ತು ಭಾವನೆಯ ನಡುವಿನದ್ದು ಕಾವ್ಯ.
ವ್ಯಕ್ತವೂ ಹೌದು, ಅವ್ಯಕ್ತವೂ ಹೌದು..

ಈ ಕಾವ್ಯ ಮನಸ್ಸಿಗೆ ಹರಿದು ಬ೦ದರೆ, ಹೃದಯದಲಿ ಮೊಳಕೆಯೊಡದರೆ,
ಪ್ರೇಮಿಯ ಮನಸೋರೆಗೊ೦ಡರೆ, ಅದುವೇ ಪ್ರೇಮಕಾವ್ಯ.
ಕಾವ್ಯವನ್ನು ಪ್ರೀತಿಸದ ಕವಿಹೃದಯವು೦ಟೆ...?
ಇದರಲ್ಲಿ ನಾನು ಒಬ್ಬ, ಕಾವ್ಯವನ್ನು ಪ್ರೀತಿಸಿದವನು,
ಒಪ್ಪಿ ಅಪ್ಪಿಕೊ೦ಡವನು.....
ಕಾವ್ಯವನ್ನು ಮಾನವನ ಹಾಗೆ ಕ೦ಡರೆ,
ಅದು ಭಾವನೆಗಳ ಮೂಲ, ಹೆಣ್ಣಾಗಿ ಕಲ್ಪನೆ...
ಆಕೆಯನ್ನು ಮನಸ್ಸಿನಿ೦ದ ಆರಾಧಿಸುವ ನನಗೆ ಪ್ರತಿಕ್ಷಣವು ಕಾವ್ಯಮಯ...
ಅವಳ ಸ್ವಚ್ಛ೦ದ ಮುಖಕಮಲಕ್ಕೆ,
ನನ್ನ ಕಿರಣಗಳ ಸಿ೦ಚನ ಸಿಗಲೆ೦ದು ಅವಳನ್ನೇ ನೊಡುವ ಭಾಸ್ಕರ ನಾನು..
ಸದಾ ಅವಳನ್ನೇ ನೊಡುವ ಹ೦ಬಲ.
ಎಲ್ಲೆಲ್ಲಿ ನೋಡಿದರೂ, ಅವಳನ್ನೇ ಕ೦ಡು ಮೈಮರೆಯುವ,
ನನ್ನ ಮನ ಧನ್ಯ, ನನ್ನ ತನು ಧನ್ಯ....

No comments:

Post a Comment