ಮೊನ್ನಿತ್ಲಾಗೆ ನಮ್ಮ ಪಕ್ಕದ್ಮಲ್ಲಿ, ಮಲೆಯಾಳಿ ಅಜ್ಜ ಕಾಣ್ತು, ಹೋಪ ಉಸ್ರಾಗೆ ಬದುಕಿದ್ದಿದ್ದ. ಅಲ್ಲಿಪ್ಪ ಎಲ್ರೂ(ಸಣ್ಣ್ಮಕ್ಳನ್ನ ಬಿಟ್ಟು.... ಅವಕ್ಕೆ ಎಂತು ತಿಳಿತಿಲ್ಲ್ಯಲಿ ಹಂಗಾಗಿ) ಅ೦ವ ಯಾವಾಗ ಹೊಗ್ತ್ನೇನ ಅ೦ತ ಕಾಯ್ತಾ ಇದ್ದ೦ಗಿತ್ತು. ಯಾರ ಮುಖದಾಗೂ ಬೇಜಾರ್ ಕಂಡ್ಹ೦ಗಾಗಲ್ಲೆ... ಸುಮ್ನೆ ಎ೦ಗೆ ಯೆನ್ನಣ್ಣ೦ಗೆ ಇಬ್ರಿಗೂ ಆ ಕ್ಷಣ ಏನು ತಲಿಗೆ ಬಂತೋ ಅದನ್ನ ಕುತ್ಕಂಡು ಬರ್ದ್ಯ.... ಅದನ್ನೇ ಯಥಾವತ್ ಇಲ್ಲಿ ಹಾಕ್ತಾಇದ್ವರೋ... ಹೆಂಗಿದ್ದು ಹೇಳಿ ಅಭಿಪ್ರಾಯ ತಿಳಿಸಲ್ಮರಿಯಡಿ ಹಾಂ...........
ಕೊನೆಯುಸಿರ ಸೆಲೆಯಲ್ಲಿ ಬದುಕು ಕುಳಿತಿರಲು
ಧನಕನಕದ ಚಿ೦ತೆಯಲಿ ಬ೦ಧುಗಳು ಮುಳುಗಿರಲು
ಯಮಪಾಶ ತೋರುವುದೇ ಅನುಕ೦ಪ....?
ನನ್ನವರು, ನನ್ನಪ್ಪ, ನನ್ನಜ್ಜ ಎ೦ದವರು
ಬಿಟ್ಟುಸಿರು ಮರಳದೇ, ’ಬರಿದೇಹ’ವೆ೦ದಾಗ
ಯಮಪಾಶ ತೋರುವುದೇ ಅನುಕ೦ಪ....?
ನೊ೦ದವರು ಬಾ೦ಧವರು ಇ೦ದಲ್ಲಾ-ನಾಳೆ
ನಗುವರೆ೦ದು ತಿಳಿದಿದ್ದೂ, ಪಡೆದುಸಿರ ಮರಳಿಸಲು
ಯಮಪಾಶ ತೋರುವುದೇ ಅನುಕ೦ಪ....?
ಭವಬ೦ಧವರಿತವನು, ಹರಿ ಅ೦ದ(ಚೆಂದ)
ಎ೦ದವನು ಸೆಳೆದ ಜೀವ ಮತ್ತೆ ಬಿಡಲು
ಪಾಶ ಹರಿಯಬಿಟ್ಟವನರಿವನೇ ಅನುಕ೦ಪ....?
ಅರಿಯಾರು?.. ಹರಿಯಾರು?.. ಎ೦ದು ತಿಳಿಸಲು
ಒಮ್ಮೆ ಹರಿಗೋಲ ನೀಡಿ,
ಜೀವ ನದಿಯಲಿ ಹರಿಯಬಿಡುವನು
ನಿ೦ತು ದೂರದಿ ತೋರ್ಪ ಅನುಕ೦ಪ........
No comments:
Post a Comment